ಸಿಪಿಸ್ ಕನ್ನಡ

CPS KANNADA

ಸಿಪಿಸ್ ಇಂಟರ್ನ್ಯಾಶನಲ್, ಬೆಂಗಳೂರು ಶಾಖೆ

CPS ಇಂಟರ್ನ್ಯಾಶನಲ್, ಬೆಂಗಳೂರು ಶಾಖೆ
ಸೆಂಟರ್ ಫಾರ್ ಪೀಸ್ ಅಂಡ್ ಸ್ಪಿರಿಚುವಾಲಿಟಿ ಇಂಟರ್ನ್ಯಾಶನಲ್, (CPS ಇಂಟರ್ನ್ಯಾಶನಲ್ ನವದೆಹಲಿ) ಇದು ಯಾವುದೇ ರಾಜಕೀಯ ಮತ್ತು ಲಾಭೋದ್ದೇಶವಿಲ್ಲದ ಸರ್ಕಾರೇತರ ಸಂಸ್ಥೆಯಾಗಿದೆ (NGO). ಈ ಸಂಸ್ಥೆಯು ಆಧ್ಯಾತ್ಮಿಕತೆಯ ಸಂದೇಶಗಳನ್ನು ಸಾರುವ ಮೂಲಕ ಶಾಂತಿಯ ಮೌಲ್ಯಗಳನ್ನು ಪ್ರೋತ್ಸಾಹಿಸುವ ಮತ್ತು ಅದನ್ನು ಬಲಪಡಿಸುವ ಬೃಹತ್ ಗುರಿಯನ್ನು ಹೊಂದಿದೆ.

ಈ ಸಂಸ್ಥೆಯು ಶಾಂತಿ ಮತ್ತು ಸದ್ವಿಚಾರಗಳನ್ನು ಸಾರುವ ಮೂಲಕ ದೇಶಾದ್ಯಂತ ಉತ್ತಮ ಸಮಾಜವನ್ನು ನಿರ್ಮಿಸಲು ನಿರಂತರವಾಗಿ ಶ್ರಮಿಸುತ್ತಿದೆ. ಈ ಸಂಸ್ಥೆಯನ್ನು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮೌಲಾನಾ ವಹೀದುದ್ದೀನ್ ಖಾನ್ ರವರು 2001ರಲ್ಲಿ ಸ್ಥಾಪಿಸಿದರು. ಮೌಲಾನಾ ವಹೀದುದ್ದೀನ್ ಖಾನ್ ಇವರು ಅಗಾಧ ಜ್ಞಾನವುಳ್ಳ ಇಸ್ಲಾಮೀ ವಿದ್ವಾಂಸರಾಗಿದ್ದರು. ಇದರ ಹೊರತಾಗಿ ಮೌಲಾನರು ಅನೇಕ ಆಧುನಿಕ ವಿದ್ಯೆಗಳಲ್ಲೂ ಪರಿಣಿತರಾಗಿದ್ದರು. ಮೌಲಾನರು ಶಾಂತಿಯುತ ಸಮಾಜದ ಸಂಸ್ಥಾಪನೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಈ ನಿಟ್ಟನಿಲ್ಲಿ ಅವರು ಪಟ್ಟ ಪರಿಶ್ರಮವನ್ನು ಭಾರತ ಸರಕಾರ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಸಂಸ್ಥೆಗಳು ಗುರುತಿಸಿ ಮೌಲಾನರಿಗೆ ಪ್ರಶಸ್ತಿ ನೀಡಿ ಅವರನ್ನು ಸನ್ಮಾನಿಸಿ ಗೌರವಿಸಿವೆ. ಭಾರತದ ಎರಡನೆ ಅತಿದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಡಿಮಿಯುರ್ಗಸ್ ಅಂತರ್ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಶಾಂತಿಸ್ಥಾಪನೆಗಾಗಿ ಅವಿರತ ಪರಿಶ್ರಮವನ್ನು ಗುರುತಿಸಿ ಮುಸ್ಲಿಂ ಸಮುದಾಯದಲ್ಲಿ ನೀಡಲಾಗುವ ಸಯ್ಯಿದಿನಾ ಇಮಾಮ್ ಹಸನ್ ಇಬ್ನೆ ಅಲಿ ಪ್ರಶಸ್ತಿಗಳು ಮೌಲಾನಾರ ಮುಡಿಗೇರಿವೆ.

CPS ಇಂಟರ್ನ್ಯಾಶನಲ್, ಬೆಂಗಳೂರು ಶಾಖೆ

ಜಾತಿ-ಮತ ಬೇಧವಿಲ್ಲದೆ ಸೌಹಾರ್ದಯುತ ಸಮಾಜವನ್ನು ನಿರ್ಮಿಸುವ ಹಾಗೂ ಜನರ ನಡುವಿನ ಆಧ್ಯಾತ್ಮಿಕ ಯುಕ್ತಿ ಹಾಗೂ ಬೌದ್ಧಿಕ ವಿಚಾರ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುವ ಸಲುವಾಗಿ CPS ಇಂಟರ್ನ್ಯಾಶನಲ್ ಇದರ ಬೆಂಗಳೂರು ಶಾಖೆ ಪ್ರಾರಂಭವಾಯಿತು. CPS ಇಂಟರ್ನ್ಯಾಶನಲ್ ನ ಕಾರ್ಯಕರ್ತರು ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದಯುತ ವಾತಾವರಣವನ್ನು ನಿರ್ಮಿಸುವ ಸಲುವಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ನಾವು ಶಾಂತಿ ಹಾಗೂ ಸೌಹಾರ್ದಯುತ ಸಮಾಜ ನಿರ್ಮಾಣವನ್ನೇ ಅತ್ಯುನ್ನತ ಸೇವೆ ಎಂದು ಪರಿಗಣಿಸಿದ್ದೇವೆ. ವೈಯಕ್ತಿಕ ಮತ್ತು ಸಾಮಾಜಿಕ ಮಟ್ಟದಲ್ಲಿ ಶಾಂತಿ ಹಾಗೂ ಸೌಹಾರ್ದ ನೆಲೆಸುವಂತೆ ಮಾಡುವುದು ನಮ್ಮ ಪರಮೋಚ್ಛ ಧ್ಯೇಯವಾಗಿದೆ. ಪ್ರತಿಯೊಬ್ಬರೂ ಅವರವರ ಧರ್ಮಗಳ ಸಾರಗಳನ್ನು ಸರಿಯಾದ ರೀತಿಯಲ್ಲಿ ಮನಗಂಡು, ಅವುಗಳ ಸಂದೇಶಗಳನ್ನು ಚೆನ್ನಾಗಿ ಅರ್ಥೈಸಿಕೊಂಡಾಗ ಮಾತ್ರ ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಸಾಧಿಸಲು ಸಾಧ್ಯ ಎಂಬುದು ಸಂಸ್ಥೆಯ ಅಭಿಪ್ರಾಯವಾಗಿದೆ.

ಕಿರು ಪುಸ್ತಕ

KANNADA QURAN

ಕನ್ನಡ ಕುರ್‌ಆನ್

OUR WEBSITES